
9th March 2025
ಜಿ ಎಮ್ ನ್ಯೂಜ್ ಕುಷ್ಟಗಿ.
ಕುಷ್ಟಗಿ ಪಟ್ಟಣದ ಕರೀಂ ಕಾಲೋನಿಯ ಕನಕದಾಸ ಸರ್ಕಲ್ ಹತ್ತಿರದ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಬಸಯ್ಯ ಮಹಾಂತಯ್ಯ ಗೋನಾಳಮಠ (88) ಇಂದು ಭಾನುವಾರ ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರೆಂದು ತಿಳಿಸಲು ವಿಶಾದವೆನಿಸುತ್ತದೆ.
ಮೃತರಾದ ಬಸಯ್ಯ ಗೋನಾಳಮಠ ಅವರು
ಸರ್ಕಾರಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಮೃತರ ಪಾರ್ಥಿವ ಶರೀರವು ಬೆಂಗಳೂರಿನಿಂದ ಇಂದು ಸಾಯಂಕಾಲ 5:00 ಗಂಟೆಗೆ ಕುಷ್ಟಗಿ ಪಟ್ಟಣಕ್ಕೆ ಬರಬಹುದೆಂದು ಅಂದಾಜಿಸಲಾಗಿದೆ.
ಮೃತರು ಸುಧೀರ್ ಗೋನಾಳಮಠ, ಪ್ರದೀಪ್ ಗೋನಾಳಮಠ ಇವರ ತಂದೆಯವರಾಗಿದ್ದಾರೆ. ಮೃತರು ಹೆಂಡತಿ, ಇಬ್ಬರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಶಿಷ್ಯ ಬಳಗ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಾಳೆ 10-03-2025 ರಂದು ಬೆಳಗ್ಗೆ 10-00 ಗಂಟೆಗೆ ಕುಷ್ಟಗಿ ನಗರದ ವೀರಶೈವ ಲಿಂಗಾಯಿತ ರುದ್ರಭೂಮಿಯಲ್ಲಿ ಜರಗುವುದು.
ಮೃತ ಬಸಯ್ಯ ಗೋನಾಳಮಠ ಗುರುಗಳಿಗೆ ಕುಷ್ಟಗಿ ಜನತೆಯಿಂದ ಭಾವಪೂರ್ಣ ಶ್ರದ್ಧಾಂಜಲಿ.
ವರದಿ : ಭೀಮಸೇನರಾವ್ ಕುಲಕರ್ಣಿ ಕುಷ್ಟಗಿ.
ಕುಷ್ಟಗಿ ಪಟ್ಟಣದ ಕರೀಂ ಕಾಲೋನಿಯ ಕನಕದಾಸ ಸರ್ಕಲ್ ಹತ್ತಿರದ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಬಸಯ್ಯ ಮಹಾಂತಯ್ಯ ಗೋನಾಳಮಠ 88 ವರ್ಷ ಇವರು ಇಂದು ಭಾನುವಾರದಂದು ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆ ಎಂದು ಮೃತರ ಪುತ್ರರಾದ ಸುಧೀರ್ ಗೋನಾಳಮಠ ತಿಳಿಸಿದ್ದಾರೆ.